Monday 15 August 2016

HAPPY INDEPENDENCE DAY


"ಸಮೃದ್ದಿ" ಯಾ ಎಲ್ಲಾ VISITORS ಗೆ    HAPPY INDEPENDENCE DAY

Friday 12 August 2016

*ಅಣ್ಣಾಮಲೈ ಅವರನ್ನು ತನಿಖಾಧಿಕಾರಿಯನ್ನಾಗಿ ನೇಮಿಸಲು ಆಗ್ರಹ*

*ಅಣ್ಣಾಮಲೈ ಅವರನ್ನು ತನಿಖಾಧಿಕಾರಿಯನ್ನಾಗಿ ನೇಮಿಸಲು ಆಗ್ರಹ*
  
ಉಡುಪಿ: ಉದ್ಯಮಿ ಭಾಸ್ಕರ ಶೆಟ್ಟಿ ಅವರ ಕೊಲೆ ಪ್ರಕರಣದ ತನಿಖೆಯ ಬಗ್ಗೆ ಕಟು ಟೀಕೆಗಳು ಮತ್ತೆ ಮುಂದುವರಿದಿವೆ. ಆರೋಪಿಗಳನ್ನು ರಕ್ಷಿಸುವುದಕ್ಕಾಗಿ ಪೊಲೀಸರು ಅತ್ಯಂತ ದುರ್ಬಲ ಎಫ್ಐಆರ್‌ (ಪ್ರಥಮ ಮಾಹಿತಿ ವರದಿ) ಸಿದ್ಧಪಡಿಸಿದ್ದಾರೆ ಎಂದು ನ್ಯಾಯವಾದಿ ಶಾಂತಾರಾಮ ಶೆಟ್ಟಿ ಆರೋಪಿಸಿದ್ದಾರೆ. ಗುರುವಾರ ಭಾಸ್ಕರ ಶೆಟ್ಟಿಯವರ ತಾಯಿ ಗುಲಾಬಿ ಶೆಡ್ತಿ ಹಾಗೂ ಬಂಟ ಸಮುದಾಯದ ಮುಂದಾಳುಗಳ ಸಮ್ಮುಖದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶಾಂತಾರಾಮ ಶೆಟ್ಟಿ ಅವರು, 'ನನ್ನ ಸುದೀರ್ಘ‌ ನ್ಯಾಯವಾದಿ ಸೇವಾವಯಲ್ಲಿ ಇಷ್ಟೊಂದು ದುರ್ಬಲ ಎಫ್ಐಆರ್‌ ನೋಡಿರಲಿಲ್ಲ. ತನಿಖಾಧಿಕಾರಿ ಅನಿವಾರ್ಯವಾಗಿ, ಅವಸರ ಅವಸರವಾಗಿ ಎಫ್ಐಆರ್‌ ಸಿದ್ಧಪಡಿಸಿರುವಂತಿದೆ. ಪೊಲೀಸರ ತನಿಖೆ ಇದೇ ರೀತಿ ಮುಂದುವರಿದರೆ ಭಾಸ್ಕರ ಶೆಟ್ಟಿಯವರ ಕುಟಂಬಕ್ಕಾಗಲಿ, ಸಮಾಜಕ್ಕಾಗಲಿ ನ್ಯಾಯ ಸಿಗುವುದು ಸಂದೇಹ. ಹಾಗಾಗಿ ಕೂಡಲೇ ಸರಕಾರ ತನಿಖಾಧಿಕಾರಿಯನ್ನಾಗಿ ದಕ್ಷ, ಪ್ರಾಮಾಣಿಕ ಅಧಿಕಾರಿಯನ್ನು ನೇಮಿಸಬೇಕು. ಚಿಕ್ಕಮಗಳೂರಿಗೆ ವರ್ಗವಾದ ಎಸ್‌ಪಿ ಅಣ್ಣಾಮಲೈ ಅವರನ್ನೇ ತನಿಖಾಧಿಕಾರಿಯನ್ನಾಗಿ ನೇಮಿಸಬೇಕು' ಎಂದು ಒತ್ತಾಯಿಸಿದರು.
ಅಣ್ಣಾಮಲೈ ಅವರಿಗೆ ವರ್ಗವಾಗುವುದಕ್ಕಾಗಿ ಕಾದು ಅನಂತರ ಕೊಲೆ ನಡೆಸಿದ್ದಾರೆ ಎಂಬ ಸಾರ್ವಜನಿಕ ಊಹೆಗಳು ನಿಜವಾಗಿರುವ ಸಾಧ್ಯತೆ ಹೆಚ್ಚು. ಅಣ್ಣಾಮಲೈ ಚಿಕ್ಕಮಗಳೂರಿಗೆ ವರ್ಗವಾದ ಕೂಡಲೇ ಕೊಲೆ ನಡೆದಿದೆ. ಇದೊಂದು ಪೂರ್ವಯೋಜಿತ ಕೊಲೆ. ಆಸ್ತಿಗಾಗಿಯೇ ಈ ಕೃತ್ಯ ನಡೆದಿದೆ. ಆರಂಭದ ತನಿಖಾಧಿಕಾರಿಯಾಗಿದ್ದ ಗಿರೀಶ್‌ ಅವರ ಬದಲಿಗೆ ಎಎಸ್‌ಪಿ ಸುಮನ ಅವರನ್ನು ತನಿಖಾಧಿಕಾರಿಯನ್ನಾಗಿ ನೇಮಿಸಲಾಗಿದೆ. ಆದರೆ ಸಾಮಾನ್ಯವಾಗಿ ಐಪಿಎಸ್‌ ಅಧಿಕಾರಿಗಳಿಗೆ ಇಂತಹ ಪ್ರಕರಣಗಳ ತನಿಖೆ ಅನುಭವ ಕಡಿಮೆ ಇರುತ್ತದೆ. ಅಣ್ಣಾಮಲೈ ಐಪಿಎಸ್‌ ಆಗಿದ್ದರೂ ಅವರಲ್ಲಿ ಸರಿಯಾದ ತನಿಖೆ ನಡೆಸುವ ಸಾಮರ್ಥ್ಯ ಇದೆ ಎಂದವರು ಹೇಳಿದರು.
ಅಪರೂಪದ ಪ್ರಕರಣ
ಆಯುಷಿ, ಇಂದ್ರಾಣಿ, ತಂದೂರ್‌ ಮೊದಲಾದ ಕೊಲೆ ಪ್ರಕರಣಗಳನ್ನು ಉಲ್ಲೇಖೀಸಿದ ಶೆಟ್ಟಿ ಅವರು 'ಅಗ್ನಿಕುಂಡದಲ್ಲಿ ಸುಡಲಾಗಿದೆ ಎನ್ನಲಾಗಿರುವ ಈ ಪ್ರಕರಣ ಅಪರೂಪದಲ್ಲಿ ಅಪರೂಪವಾದದ್ದು. ಆದರೆ ಪೊಲೀಸರು ಈ ಕೊಲೆ ಪ್ರಕರಣವನ್ನು ದಾಖಲಿಸಿಕೊಳ್ಳುವಲ್ಲಿಂದ ತನಿಖೆಯ ಎಲ್ಲ ಹಂತಗಳಲ್ಲೂ ನಿರ್ಲಕ್ಷ್ಯ ತೋರಿದ್ದಾರೆ. ಆರೋಪಿಗಳಿಗೆ ಅನುಕೂಲ ಮಾಡಿಕೊಡುವ ರೀತಿಯಲ್ಲಿಯೇ ವರ್ತಿಸಿದ್ದಾರೆ' ಎಂದು ಹೇಳಿದರು. ತನಿಖೆಯನ್ನು ಎಷ್ಟು ಹಾಳು ಮಾಡಬಹುದೋ ಅಷ್ಟು ಹಾಳು ಮಾಡಿ ಆಗಿದೆ. ಆದಾಗ್ಯೂ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿ ತನಿಖಾಧಿಕಾರಿಯಾಗಿ ನೇಮಕಗೊಂಡರೆ ಸರಿಪಡಿಸಲು ಅವಕಾಶವಿದೆ. ಆ.12ರಂದು ಆರೋಪಿಗಳಾದ ರಾಜೇಶ್ವರಿ ಮತ್ತು ನವನೀತ್‌ ಶೆಟ್ಟಿಯನ್ನು ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ. ಆ ಸಂದರ್ಭದಲ್ಲಿ ಮತ್ತೂಮ್ಮೆ ಪೊಲೀಸ್‌ ಕಸ್ಟಡಿಗೆ ಪಡೆದುಕೊಂಡರೆ ಮತ್ತಷ್ಟು ಮಾಹಿತಿ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. 15 ದಿನಗಳವರೆಗೆ ಪೊಲೀಸ್‌ ಕಸ್ಟಡಿ ಪಡೆಯಲು ಅವಕಾಶವಿದೆ. ಇದುವರೆಗೆ 5 ದಿನಗಳ ಪೊಲೀಸ್‌ ಕಸ್ಟಡಿ ಮಾತ್ರ ಆಗಿದೆ ಎಂದರು.
ಸಮರ್ಪಕ ತನಿಖೆಗಾಗಿ ನಿರಂತರ ಒತ್ತಡ ಹಾಕುವ ಕೆಲಸ ನಡೆಯುತ್ತಿದ್ದು ನ್ಯಾಯ ದೊರೆಯುವವರೆಗೂ ಹೋರಾಟ ಮುಂದುವರಿಸಲಾಗುವುದು ಎಂದು ಉಡುಪಿ ಬಂಟರ ಸಂಘದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಹೇಳಿದರು. ಮುಂಬಯಿ ಬಂಟರ ಸಂಘದ ಅಧ್ಯಕ್ಷ ಪ್ರಭಾಕರ ಎಲ್‌.ಶೆಟ್ಟಿ, ಮಾತೃಸಂಘದ ಉಪಸಂಚಾಲಕ ಅಂಡಾರು ದೇವಿಪ್ರಸಾದ್‌ ಶೆಟ್ಟಿ, ಮನೋಹರ್‌ ಶೆಟ್ಟಿ, ನ್ಯಾಯವಾದಿ ಶಶಿಕಾಂತ ಶೆಟ್ಟಿ, ತಲ್ಲೂರು ಚಂದ್ರಶೇಖರ ಶೆಟ್ಟಿ, ಮೋಹನ ಶೆಟ್ಟಿ, ಸಂತೋಷ್‌ ಶೆಟ್ಟಿ ಉಪಸ್ಥಿತರಿದ್ದರು.
ಸರಕಾರಿ ಅಭಿಯೋಜಕರಿಗೆ ಸಹಾಯ
ನಾನು ಮತ್ತು ನ್ಯಾಯವಾದಿ ಶಶಿಕಾಂತ ಶೆಟ್ಟಿ ಅವರು ಸರಕಾರಿ ಅಭಿಯೋಜಕರಿಗೆ ಸಹಾಯಕ ನ್ಯಾಯವಾದಿಗಳಾಗಿ ಕೆಲಸ ಮಾಡಲಿದ್ದೇವೆ. ಈ ರೀತಿಯಾಗಿ ಕೆಲಸ ಮಾಡಲು ಅವಕಾಶವಿದೆ ಎಂದ ಶಾಂತಾರಾಮ ಶೆಟ್ಟಿ ಅವರು, ಮೊದಲು ದಕ್ಷ ಅಧಿಕಾರಿ ತನಿಖಾಧಿಕಾರಿಯಾಗಲಿ. ಅನಂತರ ಸಿಒಡಿ ಅಥವಾ ಸಿಐಡಿ ತನಿಖೆ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿ ಎಂದರು.
ಮೂವರು ಮಾತ್ರ ಆರೋಪಿಗಳೆ?
ಸಾಮಾನ್ಯವಾಗಿ ಯಾವುದೇ ಪ್ರಕರಣದಲ್ಲಿ ಎಫ್ಐಆರ್‌ ದಾಖಲಾಗುವಾಗ ಅದರಲ್ಲಿರುವ ನಿಗದಿತ ಕಾಲಂನಲ್ಲಿ ಆರೋಪಿಗಳ ಹೆಸರು ಬರೆದು ಅನಂತರ 'ಇತರರು' ಎಂದು ಬರೆಯಲಾಗುತ್ತದೆ. ಆದರೆ ಈ ಪ್ರಕರಣದಲ್ಲಿ ಕೇವಲ ರಾಜೇಶ್ವರಿ ಶೆಟ್ಟಿ, ನವನೀತ್‌ ಶೆಟ್ಟಿ ಮತ್ತು ನಿರಂಜನ್‌ ಭಟ್‌ ಹೆಸರನ್ನು ಮಾತ್ರ ಉಲ್ಲೇಖೀಸಲಾಗಿದೆ. ಈ ಕೊಲೆ ಕೇವಲ ಮೂವರಿಂದ ಮಾತ್ರವೇ ನಡೆದಿರಲಿಕ್ಕಿಲ್ಲ ಎಂದು ಶಾಂತಾರಾಮ ಶೆಟ್ಟಿ ಹೇಳಿದರು. ಈಗ ಬಂಧಿತರಾಗಿರುವ ಆರೋಪಿಗಳ ಜತೆಗೆ ಕಾಣದ ಕೈಗಳು ಕೆಲಸ ಮಾಡಿರುವ ಬಗ್ಗೆ ಕುಟುಂಬಿಕರು ಮತ್ತು ಬಂಟ ಸಮುದಾಯದ ಮುಂದಾಳುಗಳು ಕೂಡ ಬಲವಾದ ಸಂದೇಹ ವ್ಯಕ್ತಪಡಿಸಿದರು.
ಕೇಸು ದಾಖಲಿಸಿದವರೇ ತನಿಖಾಧಿಕಾರಿ!
ಮಣಿಪಾಲ ವೃತ್ತ ನಿರೀಕ್ಷಕ ಗಿರೀಶ್‌ ಅವರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅನಂತರ ಇವರೇ ತನಿಖೆ ನಡೆಸಿದ್ದಾರೆ. ಸಾಮಾನ್ಯವಾಗಿ ಪ್ರಕರಣ ದಾಖಲಿಸಿದ ಅಧಿಕಾರಿ ತನಗಿಂತ ಮೇಲಿನ ಹಂತದ ಅಧಿಕಾರಿಯವರಿಗೆ ಪ್ರಕರಣವನ್ನು ಹಸ್ತಾಂತರಿಸಿ ಅವರಿಂದ ತನಿಖೆಯಾಗುತ್ತದೆ. ಈ ಪ್ರಕರಣದಲ್ಲಿ ಡಿಎಸ್‌ಪಿ ಅಥವಾ ಎಎಸ್‌ಪಿಗೆ ಪ್ರಕರಣ ಹಸ್ತಾಂತರವಾಗಬೇಕಿತ್ತು ಎಂದು ಶಾಂತಾರಾಮ ಶೆಟ್ಟಿ ಹೇಳಿದರು.
ಮೂಳೆಯೊಂದೇ ಸಾಕ್ಷ್ಯವಲ್ಲ
ಭಾಸ್ಕರ ಶೆಟ್ಟಿ ಶವ ನಾಶ ಮಾಡಲಾಗಿದೆ ಎಂದು ಹೇಳಲಾಗಿದ್ದರೂ ಅದರ ಅವಯವಗಳು ದೊರೆಯುವ ಸಾಧ್ಯತೆಗಳು ಇರುತ್ತವೆ. ಆದರೆ ಸರಿಯಾದ ತನಿಖೆ ನಡೆಯಬೇಕಷ್ಟೆ. ಈಗ ಎಲುಬು ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಕೇವಲ ಎಲುಬನ್ನು ಪೊಲೀಸರು ಹಿಡಿದುಕೊಂಡು ಬಂದು ಅದನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ನೀಡಿ ಅಲ್ಲಿ ಅದು ಯಾವುದೋ ಪ್ರಾಣಿಯ ಎಲುಬು ಎಂದು ತಿಳಿದುಬಂದರೆ ಆಗ ಪ್ರಕರಣವೇ ಅಂತ್ಯ ಗೊಳ್ಳಬಹುದು. ಹಾಗಾಗಿ ಇತರ ಅವಯವಗಳ ಹುಡುಕಾಟ, ಇತರ ಅಂಶಗಳ ತನಿಖೆಯಾಗಬೇಕು ಎಂದು ಶಾಂತಾರಾಮ ಶೆಟ್ಟಿ ಹೇಳಿದರು.
'ತಂದೂರ್‌'ಗಿಂತಲೂ ದೊಡ್ಡ  ಕೇಸ್‌
1995ರಲ್ಲಿ ಹೊಸದಿಲ್ಲಿಯಲ್ಲಿ ನಡೆದ ತಂದೂರ್‌ ಕೊಲೆ ಪ್ರಕರಣಕ್ಕಿಂತಲೂ ಇಲ್ಲಿ ನಡೆದಿರುವ ಹೋಮಕುಂಡದ ಪ್ರಕರಣ ದೊಡ್ಡದೆನಿಸುತ್ತದೆ. ತಂದೂರ್‌ ಪ್ರಕರಣದಲ್ಲಿ ಸುಶೀಲ್‌ ಶರ್ಮಾ ತನ್ನ ಹೆಂಡತಿಯನ್ನು ಕೊಂದಿದ್ದ. ಅನಂತರ ಶವವನ್ನು ತಂದೂರ್‌ ಮಾಡುವ ಕಾವಲಿಗೆ ಹಾಕಿ ಸುಡಲಾಗಿತ್ತು. ಅಲ್ಲಿ ದೇಹದ ಕೆಲವು ಅವಯವಗಳು ಸುಟ್ಟ ಸ್ಥಿತಿಯಲ್ಲಿ ದೊರೆತಿದ್ದವು. ಆರೋಪಿ ಇಂದಿಗೂ ಜೈಲಿನಲ್ಲಿದ್ದಾನೆ. ಭಾಸ್ಕರ ಶೆಟ್ಟಿ ಕೊಲೆ ಪ್ರಕರಣದಲ್ಲಿಯೂ ದೇಹದ ಯಾವುದಾದರೂ ಭಾಗಗಳು ದೊರೆಯುವ ಸಾಧ್ಯತೆಗಳಿವೆ. ಪೊಲೀಸರು ಸೂಕ್ತ ರೀತಿ ತನಿಖೆ ನಡೆಸಿ ಸರಿಯಾದ ಚಾರ್ಜ್‌ಶೀಟ್‌ ಸಲ್ಲಿಸಬೇಕು. ಆರೋಪಿಗಳನ್ನು ಮಂಪರು ಪರೀಕ್ಷೆಗೂ ಒಳಪಡಿಸಬೇಕು. ದಕ್ಷ ಅಧಿಕಾರಿಯನ್ನು ನೇಮಕ ಮಾಡಲು ಒತ್ತಡ ಹಾಕಬೇಕು. ಈ ಬಗ್ಗೆ ಈಗಾಗಲೇ ಸಚಿವ ಪ್ರಮೋದ್‌ ಭರವಸೆ ನೀಡಿದ್ದಾರೆ ಎಂದು ಶಾಂತಾರಾಮ ಶೆಟ್ಟಿ ಹೇಳಿದರು.
By- Smart News

*ಕೋಟಿಗೊಬ್ಬ-2ಗೆ ಸಾವಿರ ಚಿತ್ರಮಂದಿರ*

*ಕೋಟಿಗೊಬ್ಬ-2ಗೆ ಸಾವಿರ ಚಿತ್ರಮಂದಿರ*
"ಕೋಟಿಗೊಬ್ಬ 2' ಬಿಡುಗಡೆಯಾಗುವುದಕ್ಕೆ ವೇದಿಕೆ ಸಜ್ಜಾಗಿದೆ. ಚಿತ್ರ ಅಧಿಕೃತವಾಗಿ ಬಿಡುಗಡೆಯಾಗುವುದು ನಾಳೆಯಾದರೂ, ಇವತ್ತು ರಾತ್ರಿ 9.30ರೆಗೆ ಮೊದಲ ಪ್ರದರ್ಶನ ಕಾಣಲಿದೆ. ಈಗಾಗಲೇ ರಾತ್ರಿ ಬೆಂಗಳೂರಿನ ಪ್ರಸನ್ನ ಚಿತ್ರಮಂದಿರದಲ್ಲಿ ಅಭಿಮಾನಿಗಳಿಗೆಂದೇ ವಿಶೇಷ ಪ್ರದರ್ಶನವನ್ನು ಆಯೋಜಿಸಲಾಗಿದ್ದು, ಆ ಪ್ರದರ್ಶನ ಸಹ ಹೌಸ್‌ಫ‌ುಲ್‌ ಆಗಿರುವ ಸುದ್ದಿ ಇದೆ. ಇನ್ನು ನಾಳೆ ಸುಮಾರು ಸಾವಿರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.
ಸುದೀಪ್‌ ಹೀರೋ ಆಗಿ ನಟಿಸಿರುವ ಚಿತ್ರಗಳಲ್ಲಿ, ಇದುವರೆಗೂ ಯಾವೊಂದು ಚಿತ್ರ ಸಹ ಸಾವಿರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಉದಾಹರಣೆ ಇರಲಿಲ್ಲ. ಆ ಹೆಗ್ಗಳಿಕೆ "ಕೋಟಿಗೊಬ್ಬ 2'ಗಿದೆ. ಈ ವಿಷಯವಾಗಿ ಸುದೀಪ್‌ ಏನು ಹೇಳುತ್ತಾರೆ ಎಂದು ಕೆದಕಿದರೆ, ಅವರು ಹೇಳುಗುವುದ ಹೀಗೆ: ""ಕೋಟಿಗೊಬ್ಬ-2' ಸಾವಿರ ಪ್ಲಸ್‌ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತದೆ ಎಂದಾಗ ಭಯ ಆಯ್ತು. ಕೆಲವು ಸಿನಿಮಾಗಳೇ ಹಾಗೆ. ಅಲ್ಲಿ ಬರೀ ಯಾರು ಸ್ಟಾರ್‌ ಎಂದು ಜನ ನೋಡುವುದಿಲ್ಲ. ಕೆಲವು ಹೀರೋಗಳ ಸಿನಿಮಾಗಳು ಸಖತ್‌ ಹೈಪ್‌ ಪಡೆದು ಬಿಡುಗಡೆಯಾಗುತ್ತೆ. ಕೆಲವೊಮ್ಮೆ ಅವರದೇ ಸಿನಿಮಾಗಳಿಗೆ ಹೆಚ್ಚು ಡಿಮ್ಯಾಂಡ್‌ ಇರುವುದಿಲ್ಲ. ಕೆಲವು ಸಿನಿಮಾಗಳು ಸ್ಟಾರ್‌ನಿಂದ ಹೋಗತ್ತೆ. ಕೆಲವು ಕಾಂಬಿನೇಷನ್‌ನಿಂದ ವರ್ಕ್‌ ಆಗುತ್ತೆ. ಬರೀ ಹೀರೋ ಅಷ್ಟೇ ಅಲ್ಲ, ನಿರ್ದೇಶಕ, ನಾಯಕಿ, ಟೈಟಲ್‌, ಟ್ರೇಲರ್‌, ಹಾಡುಗಳು  ... ಹೀಗೆ ಎಲ್ಲವೂ ಕೌಂಟ್‌ ಆಗುತ್ತೆ. "ಕೋಟಿಗೊಬ್ಬ 2'ಗೆ ಸಹ ಹಲವು ಕಾರಣಗಳಿವೆ. ಟೀಸರ್‌ ನೋಡಿ ಜನ ಖುಪಟ್ಟರು. ಟ್ರೇಲರ್‌ ಚೆನ್ನಾಗಿತ್ತು. ಎಲ್ಲಾ ಕೂಡಿ ಈ ತರಹ ಹೈಪ್‌ ಕ್ರಿಯೇಟ್‌ ಆಗಿದೆ. ಇಲ್ಲಿ ನಾನೊಬ್ಬನೇ ಅಲ್ಲ. ಒಳ್ಳೆಯ ಕಲಾವಿದರು ಮತ್ತು ತಂತ್ರಜ್ಞರ ಜೊತೆಗೆ ಕೆಲಸ ಮಾಡಬೇಕು ಅಂತ ಯಾರು ತಾನೇ ಇಷ್ಟಪಡೋಲ್ಲ ಹೇಳಿ. ಎಲ್ಲರಿಗೂ ಇಷ್ಟ ಇರುತ್ತೆ. ನಾನು ರಕುಮಾರ್‌ ಅವರ ಸಿನಿಮಾಗಳ ನೋಡಿದ್ದೆ. ಅವರ ಜೊತೆಗೆ ಕೆಲಸ ಮಾಡಬೇಕು ಅಂತ ಆಸೆ ಇತ್ತು. ನಿತ್ಯಾ ಮೆನನ್‌ ಅವರ ಜೊತೆಗೆ ನಟಿಸಬೇಕು ಅಂತ ಆಸೆ ಇತ್ತು. ಹೀಗೆ ಒಟ್ಟಿಗೆ ಸೇರಿ ಮಾಡಿರುವುದರಿಂದ, ಚಿತ್ರದ ಬಗ್ಗೆ ಇಷ್ಟೊಂದು ಹೈಪ್‌ ಕ್ರಿಯೇಟ್‌ ಆಗಿದೆ. ನಾವು 50 ಪರ್ಸೆಂಟ್‌ ಮಾತ್ರ ಗೆದ್ದಿದ್ದೇವೆ. 25 ಪರ್ಸೆಂಟ್‌ ಮೇಕಿಂಗ್‌ನಿಂದ ಮತ್ತು 25 ಪರ್ಸೆಂಟ್‌ ಪ್ರಮೋಷನ್‌ನಿಂದ. ಇನ್ನು 50 ಪರ್ಸೆಂಟ್‌ ಕೆಲಸ ಇದೆ. ಮುಂದೆ ನೋಡೋಣ. 1000 ಚಿತ್ರಮಂದಿರಗಳು ಬಹಳ ದೊಡ್ಡ ನಂಬರ್‌. ಅಷ್ಟರಲ್ಲಿ ಹೇಗೆ ಉಳೀತೀವಿ ಅನ್ನೋದು ಮುಖ್ಯ' ಎನ್ನುತ್ತಾರೆ ಸುದೀಪ್‌.
ಇನ್ನು "ಕೋಟಿಗೊಬ್ಬ 2' ಚಿತ್ರದ ಕುರಿತಾಗಿ ಕರ್ನಾಟಕದಲ್ಲಿ ಚಿತ್ರತಂಡ ಹೆಚ್ಚು ಪ್ರಚಾರ ಮಾಡಲೇ ಇಲ್ಲ. ಆದರೆ, ಚಿತ್ರದ ತಮಿಳು ಅವತರಣಿಕೆಯಾದ "ಮುಡಿಂಜ ಇವನ ಪುಡಿ'ಯ ಹಾಡುಗಳನ್ನು ಚೆನ್ನೈನಲ್ಲಿ ಭರ್ಜರಿಯಾಗಿ ಬಿಡುಗಡೆ ಮಾಡಲಾಯಿತು. ಇಷ್ಟಕ್ಕೂ "ಕೋಟಿಗೊಬ್ಬ 2' ಚಿತ್ರತಂಡವು ಕನ್ನಡಕ್ಕಿಂತ, ತಮಿಳಿನ ಬಗ್ಗೆ ಹೆಚ್ಚು ಗಮನಹರಿಸಿದ್ದೇಕೆ ಎಂಬ ಪ್ರಶ್ನೆ ಬರುವುದು ಸಹಜ. ಈ ಕುರಿತು ಸಹ ಸುದೀಪ್‌ ಮಾತನಾಡಿದ್ದಾರೆ. "ನಿಜ ಹೇಳಬೇಕೆಂದರೆ, ನಾವು ಕನ್ನಡ ಮತ್ತು ತಮಿಳು ಚಿತ್ರಗಳೆರಡನ್ನೂ ಪ್ರಾರಂಭಿಸಿದ್ದು ಕರ್ನಾಟಕದಲ್ಲಿ. ಎರಡೂ ಚಿತ್ರಗಳ ಮುಹೂರ್ತ ಇಲ್ಲೇ ನಡೆಯಿತು. ಆದರೆ, ನಾವು "ಮುಡಿಂಜ ಇವನ ಪುಡಿ' ಎಂಬ ಚಿತ್ರ ಮಾಡುತ್ತಿದ್ದೀವಿ ಎಂದಾಗ, ತಮಿಳುನಾಡಿನಲ್ಲಿ ಬಹಳಷ್ಟು ಜನ ಇದು "ಕೋಟಿಗೊಬ್ಬ 2'ನ ಡಬ್‌x ವರ್ಷನ್‌ ಅಂತಲೇ ತಿಳಿದುಕೊಂಡಿದ್ದರು. ಏನು ಮಾಡಿದರೂ ಅದು, ಎರಡು ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣ ಮಾಡಿದ ಚಿತ್ರ ಎಂದು ಪ್ರೊಜೆಕ್ಟ್ ಮಾಡುವುದು ಕಷ್ಟವಾಯಿತು. ಅದು ನೇರವಾದ ಸಿನಿಮಾ, ಡಬ್‌x ಸಿನಿಮಾ ಅಲ್ಲ ಎಂದು ಸ್ಪಷ್ಟಪಡಿಸಬೇಕಿತ್ತು. ಆ ಸಂದರ್ಭದಲ್ಲಿ ಏನು ಮಾಡಬೇಕು ಎಂದು ಯೋಚನೆ ಮಾಡಿದಾಗ, ಅಲ್ಲಿ ಆಡಿಯೋ ಬಿಡುಗಡೆ ಮಾಡೋಣ ಅಂತ ಐಡಿಯಾ ಕೊಟ್ಟವರು ಆನಂದ್‌ ಆಡಿಯೋದವರು. ಈ ಚಿತ್ರದ ಮೂಲಕ ಆನಂದ್‌ ಆಡಿಯೋದವರು ಮೊದಲ ಬಾರಿಗೆ ತಮಿಳು ಚಿತ್ರರಂಗಕ್ಕೆ ಬರುತ್ತಿದ್ದಾರೆ. ಅವರನ್ನು ಪರಿಚಯಿಸುವುದರ ಜೊತೆಗೆ, ಚಿತ್ರ ಡಬ್‌ ಮಾಡಿದ್ದಲ್ಲ ಎಂದು ತಿಳಿಸಬೇಕಿತ್ತು. ಹಾಗಾಗಿ ಅಲ್ಲಿ ಆಡಿಯೋ ಬಿಡುಗಡೆ ಮಾಡಬೇಕಾಯಿತು. ಇನ್ನು ಕನ್ನಡದಲ್ಲಿ ಅಷ್ಟರಲ್ಲಾಗಲೇ ಹಾಡುಗಳ ಡೌನ್‌ಲೋಡ್‌ ಪ್ರಾರಂಭವಾಗಿ ಜನಪ್ರಿಯವಾಗಿತ್ತು. ಹಾಗಾಗಿ ಚೆನ್ನೈನಲ್ಲಿ ತಮಿಳು ಚಿತ್ರದ ಹಾಡುಗಳ ಬಿಡುಗಡೆ ಮಾಡಿ, ಇದು ನೇರವಾದ ಚಿತ್ರ ಎಂದು ಸ್ಪಷ್ಟಪಡಿಸುವ ಅಗತ್ಯತೆ ಇತ್ತು. ನಿಜ ಹೇಳಬೇಕೆಂದರೆ, ಆ ಸಮಾರಂಭ ಆದ ನಂತರ, ವಿತರಕರು ಸ್ವಲ್ಪ ಸೀರಿಯಸ್‌ ಆದರು. ಚಿತ್ರದ ಬಿಝಿನೆಸ್‌ ಸಹ ಓಪನ್‌ ಆಯ್ತು' ಎನ್ನುತ್ತಾರೆ ಸುದೀಪ್‌.

Sunday 18 October 2015

ರಂಗಿತರಂಗ


 
ರಂಗಿತರಂಗ
ನಿರ್ದೇಶನ ಅನೂಪ್ ಭಂಡಾರಿ
ಲೇಖಕ ಅನೂಪ್ ಭಂಡಾರಿ
ಪಾತ್ರವರ್ಗ ನಿರೂಪ್ ಭಂಡಾರಿ, ರಾಧಿಕ ಚೆತನ್, ಅವಂತಿಕ ಶೆಟ್ಟಿ, ಸಾಯಿಕುಮಾರ್
ಸಂಗೀತ ಅನೂಪ್ ಭಂಡಾರಿ/ಹಿನ್ನೆಲೆ:ಬಿ.ಅಜನೀಶ್ ಲೋಕ್ನಾಥ್
ಛಾಯಾಗ್ರಹಣ ಲಾನ್ಸ್ ಕಪ್ಲನ್, ವಿಲ್ಲಿಯಮ್ ಡೇವಿಡ್
ಬಿಡುಗಡೆಯಾಗಿದ್ದು ೩ ಜುಲೈ ೨೦೧೫
ಅವಧಿ ೧೪೯ ನಿಮಿಶಗಳು
ದೇಶ ಭಾರತ
ಭಾಷೆ ಕನ್ನಡ
ಬಂಡವಾಳ ೧.೫ ಕೋಟಿ


ಕಥಾಹಂದರ

ಆಕರ್ಷಕ ವ್ಯಕ್ತಿತ್ವದ ಹಸನ್ಮುಖಿ ನಾಯಕ ಗೌತಮ್ ಸುವರ್ಣ, ಕಾದಂಬರಿಕಾರ. ಆತನಿಗೊಂದು ನಿಗೂಡ ಹಿನ್ನೆಲೆ ಇರುತ್ತದೆ. ಆತನ ಹೊಸ ಕಾದಂಬರಿ 'ರಂಗಿತರಂಗ'. ಈ ಪದ ಅವನ ನಿಗೂಡ ಹಿನ್ನೆಲೆಗಿರುವ ಕೀಲಿ ಕೈಯೂ ಹೌದು. ಅವನು ಊಟಿಯಲ್ಲಿ ಜನರಿಂದ ದೂರ ವಾಸಿಸುತ್ತಿರುವನು. ಮೃದು ಸ್ವಭಾವದ ಇಂದು, ಭೀತಿಯಲ್ಲಿ ದಿನ ಕಳೆಯುತ್ತಿರುವ ಓರ್ವ ಪೈಂಟರ್. ಕುಂಚ ಕೈಯಲ್ಲಿದ್ದರೆ ಪ್ರಪಂಚವನ್ನೇ ಮರೆತು ಬಿಡುತ್ತಾಳೆ.ಸಂಧ್ಯಾ ಓರ್ವ ಉತ್ಸಾಹೀ ಪತ್ರಕರ್ತೆ. "ಅನಷ್ಕು" ಎಂಬ ಕಾವ್ಯನಾಮದಲ್ಲಿ ಕಾದಂಬರಿಗಳನ್ನು ಬರೆಯತ್ತಿರುವ ಅನಾಮಧೆಯ ವ್ಯಕ್ಥಿಯ ಬೆನ್ನು ಹತ್ತಿ ಊರಿಂದೂರು ಅಲೆಯುತ್ತಿರುತ್ತಾಳೆ. ಅನಿವಾರ್ಯ ಕಾರಣಗಳಿಂದ ಗೌತಮ್ ಕಮರೊಟ್ಟು ಗ್ರಾಮದಲ್ಲಿರುವ ಇಂದುವಿನ ಪೂರ್ವಜರ ಮನೆಗೆ ಹೋಗಬೇಕಾಗಿ ಬರುವುದು. ಗೌತಮ್ ನ ಆಗಮನ ಕಾಳಿಂಗ ಮತ್ತು ಶಂಕರ ಮೇಸ್ಟ್ರಿಗೆ ಹಿತವೆನಿಸಿದರೂ ಕೆಲವು ಪ್ರಭಾವೀ ವ್ಯಕ್ತಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸುವುದು. ಒಮ್ಮಿಂದೊಮ್ಮೆಗೆ ಇವರಿಗೆ ಹಲವಾರು ವಿಚಿತ್ರ ಘಟನೆಗಳು ಎದುರಾಗುವವು. ತಲ್ಲಣಗೊಂಡ ಗೌತಮ್ ಈ ಅನಿರೀಕ್ಷಿತ ಘಟನೆಗಳಿಗೆ ಕಾರಣ ಹುಡುಕಲು ಹೊರಟಾಗ ಸಮಸ್ಯೆಯ ಸರಮಾಲೆಯನ್ನೇ ಎದುರಿಸ ಬೇಕಾಗುವುದು. ಅದೇ ಹೊತ್ತಿಗೆ ಅನಷ್ಕುವಿನ ಹುಡುಕಾಟದಲ್ಲಿ ಸಂಧ್ಯಾ ಕಮರೊಟ್ಟು ತಲುಪುವಳು. ಆಗ ಅಲ್ಲೊಂದು ಭಯಾನಕ ಅನಾಹುತ ಸಂಭವಿಸುವುದು!!!


ಪಾತ್ರಗಳು

ಪಾತ್ರ ಕಲಾವಿದರು
ಗೌತಮ್/ಸಿಧ್ಧಾರ್ತ್ ನಿರೂಪ್ ಭಂಡಾರಿ
ತೆಂಕಬೈಲ್ ಕಾಳಿಂಗ ಭಟ್ಟ ಸಾಯಿಕುಮಾರ್
ಇಂಧು ಸುವರ್ಣ/ಹರಿಣಿ ರಾಧಿಕ ಚೆತನ್
ಸಂಧ್ಯಾ ಅವಂತಿಕ ಶೆಟ್ಟಿ
ಶಂಕರ್ ಮಾಸ್ಟರ್ ಅನಂತ್ ವೇಲು
ಬಸವರಾಜ ಹಾದಿಮನಿ ಅರವಿಂದ್ ರಾವ್
ನಿಲೇಶ್ ಗೌಡ (ಪಾಂಡು) ಸಿದ್ದು ಮೂಲಿಮನಿ
ಪಂಚಮಿ (ಪಾಂಚಾಲಿ) ರೋಶಿನಿ ಕೋರೆ
ಚೆತನ್ ರಾಜ್ ಗರ್ನಾಲ್ ಬಾಬು
ರಫೀಕ್ ಕಾರ್ತಿಕ್ ರಾವ್
*ಗೌತಮ್ ಸುವರ್ಣಾ ಅನೂಪ್ ಭಂಡಾರಿ  



Online ಶಾಪಿಂಗ್ ನಲ್ಲಿ ಕೌ ಡಂಗ್ ಕೇಕ್...!




 ಹೌದು.....
          ಈಗ  Online ಶಾಪಿಂಗ್ ನಲ್ಲಿ ಕೌ ಡಂಗ್ ಕೇಕ್ ಸಿಗುತ್ತದೆ. ಇದರಿಂದ ಪಟ್ಟಣದ ಜನರಿಗೆ ಸುಲಭವಾಗಿ ಕೌ ಡಂಗ್ ಕೇಕ್ ದೊರಕುತ್ತದೆ.ತಂತ್ರಜ್ಞಾನ ಎಲ್ಲವನ್ನೂ ಕೈಗೆಟಕುವಂತೆ ಮಾಡಿದೆ.
www.ebay.in

www.amazon.in

www.homatheraphyindia.com

www.shopclues.com