Friday 12 August 2016

*ಕೋಟಿಗೊಬ್ಬ-2ಗೆ ಸಾವಿರ ಚಿತ್ರಮಂದಿರ*

*ಕೋಟಿಗೊಬ್ಬ-2ಗೆ ಸಾವಿರ ಚಿತ್ರಮಂದಿರ*
"ಕೋಟಿಗೊಬ್ಬ 2' ಬಿಡುಗಡೆಯಾಗುವುದಕ್ಕೆ ವೇದಿಕೆ ಸಜ್ಜಾಗಿದೆ. ಚಿತ್ರ ಅಧಿಕೃತವಾಗಿ ಬಿಡುಗಡೆಯಾಗುವುದು ನಾಳೆಯಾದರೂ, ಇವತ್ತು ರಾತ್ರಿ 9.30ರೆಗೆ ಮೊದಲ ಪ್ರದರ್ಶನ ಕಾಣಲಿದೆ. ಈಗಾಗಲೇ ರಾತ್ರಿ ಬೆಂಗಳೂರಿನ ಪ್ರಸನ್ನ ಚಿತ್ರಮಂದಿರದಲ್ಲಿ ಅಭಿಮಾನಿಗಳಿಗೆಂದೇ ವಿಶೇಷ ಪ್ರದರ್ಶನವನ್ನು ಆಯೋಜಿಸಲಾಗಿದ್ದು, ಆ ಪ್ರದರ್ಶನ ಸಹ ಹೌಸ್‌ಫ‌ುಲ್‌ ಆಗಿರುವ ಸುದ್ದಿ ಇದೆ. ಇನ್ನು ನಾಳೆ ಸುಮಾರು ಸಾವಿರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.
ಸುದೀಪ್‌ ಹೀರೋ ಆಗಿ ನಟಿಸಿರುವ ಚಿತ್ರಗಳಲ್ಲಿ, ಇದುವರೆಗೂ ಯಾವೊಂದು ಚಿತ್ರ ಸಹ ಸಾವಿರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಉದಾಹರಣೆ ಇರಲಿಲ್ಲ. ಆ ಹೆಗ್ಗಳಿಕೆ "ಕೋಟಿಗೊಬ್ಬ 2'ಗಿದೆ. ಈ ವಿಷಯವಾಗಿ ಸುದೀಪ್‌ ಏನು ಹೇಳುತ್ತಾರೆ ಎಂದು ಕೆದಕಿದರೆ, ಅವರು ಹೇಳುಗುವುದ ಹೀಗೆ: ""ಕೋಟಿಗೊಬ್ಬ-2' ಸಾವಿರ ಪ್ಲಸ್‌ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತದೆ ಎಂದಾಗ ಭಯ ಆಯ್ತು. ಕೆಲವು ಸಿನಿಮಾಗಳೇ ಹಾಗೆ. ಅಲ್ಲಿ ಬರೀ ಯಾರು ಸ್ಟಾರ್‌ ಎಂದು ಜನ ನೋಡುವುದಿಲ್ಲ. ಕೆಲವು ಹೀರೋಗಳ ಸಿನಿಮಾಗಳು ಸಖತ್‌ ಹೈಪ್‌ ಪಡೆದು ಬಿಡುಗಡೆಯಾಗುತ್ತೆ. ಕೆಲವೊಮ್ಮೆ ಅವರದೇ ಸಿನಿಮಾಗಳಿಗೆ ಹೆಚ್ಚು ಡಿಮ್ಯಾಂಡ್‌ ಇರುವುದಿಲ್ಲ. ಕೆಲವು ಸಿನಿಮಾಗಳು ಸ್ಟಾರ್‌ನಿಂದ ಹೋಗತ್ತೆ. ಕೆಲವು ಕಾಂಬಿನೇಷನ್‌ನಿಂದ ವರ್ಕ್‌ ಆಗುತ್ತೆ. ಬರೀ ಹೀರೋ ಅಷ್ಟೇ ಅಲ್ಲ, ನಿರ್ದೇಶಕ, ನಾಯಕಿ, ಟೈಟಲ್‌, ಟ್ರೇಲರ್‌, ಹಾಡುಗಳು  ... ಹೀಗೆ ಎಲ್ಲವೂ ಕೌಂಟ್‌ ಆಗುತ್ತೆ. "ಕೋಟಿಗೊಬ್ಬ 2'ಗೆ ಸಹ ಹಲವು ಕಾರಣಗಳಿವೆ. ಟೀಸರ್‌ ನೋಡಿ ಜನ ಖುಪಟ್ಟರು. ಟ್ರೇಲರ್‌ ಚೆನ್ನಾಗಿತ್ತು. ಎಲ್ಲಾ ಕೂಡಿ ಈ ತರಹ ಹೈಪ್‌ ಕ್ರಿಯೇಟ್‌ ಆಗಿದೆ. ಇಲ್ಲಿ ನಾನೊಬ್ಬನೇ ಅಲ್ಲ. ಒಳ್ಳೆಯ ಕಲಾವಿದರು ಮತ್ತು ತಂತ್ರಜ್ಞರ ಜೊತೆಗೆ ಕೆಲಸ ಮಾಡಬೇಕು ಅಂತ ಯಾರು ತಾನೇ ಇಷ್ಟಪಡೋಲ್ಲ ಹೇಳಿ. ಎಲ್ಲರಿಗೂ ಇಷ್ಟ ಇರುತ್ತೆ. ನಾನು ರಕುಮಾರ್‌ ಅವರ ಸಿನಿಮಾಗಳ ನೋಡಿದ್ದೆ. ಅವರ ಜೊತೆಗೆ ಕೆಲಸ ಮಾಡಬೇಕು ಅಂತ ಆಸೆ ಇತ್ತು. ನಿತ್ಯಾ ಮೆನನ್‌ ಅವರ ಜೊತೆಗೆ ನಟಿಸಬೇಕು ಅಂತ ಆಸೆ ಇತ್ತು. ಹೀಗೆ ಒಟ್ಟಿಗೆ ಸೇರಿ ಮಾಡಿರುವುದರಿಂದ, ಚಿತ್ರದ ಬಗ್ಗೆ ಇಷ್ಟೊಂದು ಹೈಪ್‌ ಕ್ರಿಯೇಟ್‌ ಆಗಿದೆ. ನಾವು 50 ಪರ್ಸೆಂಟ್‌ ಮಾತ್ರ ಗೆದ್ದಿದ್ದೇವೆ. 25 ಪರ್ಸೆಂಟ್‌ ಮೇಕಿಂಗ್‌ನಿಂದ ಮತ್ತು 25 ಪರ್ಸೆಂಟ್‌ ಪ್ರಮೋಷನ್‌ನಿಂದ. ಇನ್ನು 50 ಪರ್ಸೆಂಟ್‌ ಕೆಲಸ ಇದೆ. ಮುಂದೆ ನೋಡೋಣ. 1000 ಚಿತ್ರಮಂದಿರಗಳು ಬಹಳ ದೊಡ್ಡ ನಂಬರ್‌. ಅಷ್ಟರಲ್ಲಿ ಹೇಗೆ ಉಳೀತೀವಿ ಅನ್ನೋದು ಮುಖ್ಯ' ಎನ್ನುತ್ತಾರೆ ಸುದೀಪ್‌.
ಇನ್ನು "ಕೋಟಿಗೊಬ್ಬ 2' ಚಿತ್ರದ ಕುರಿತಾಗಿ ಕರ್ನಾಟಕದಲ್ಲಿ ಚಿತ್ರತಂಡ ಹೆಚ್ಚು ಪ್ರಚಾರ ಮಾಡಲೇ ಇಲ್ಲ. ಆದರೆ, ಚಿತ್ರದ ತಮಿಳು ಅವತರಣಿಕೆಯಾದ "ಮುಡಿಂಜ ಇವನ ಪುಡಿ'ಯ ಹಾಡುಗಳನ್ನು ಚೆನ್ನೈನಲ್ಲಿ ಭರ್ಜರಿಯಾಗಿ ಬಿಡುಗಡೆ ಮಾಡಲಾಯಿತು. ಇಷ್ಟಕ್ಕೂ "ಕೋಟಿಗೊಬ್ಬ 2' ಚಿತ್ರತಂಡವು ಕನ್ನಡಕ್ಕಿಂತ, ತಮಿಳಿನ ಬಗ್ಗೆ ಹೆಚ್ಚು ಗಮನಹರಿಸಿದ್ದೇಕೆ ಎಂಬ ಪ್ರಶ್ನೆ ಬರುವುದು ಸಹಜ. ಈ ಕುರಿತು ಸಹ ಸುದೀಪ್‌ ಮಾತನಾಡಿದ್ದಾರೆ. "ನಿಜ ಹೇಳಬೇಕೆಂದರೆ, ನಾವು ಕನ್ನಡ ಮತ್ತು ತಮಿಳು ಚಿತ್ರಗಳೆರಡನ್ನೂ ಪ್ರಾರಂಭಿಸಿದ್ದು ಕರ್ನಾಟಕದಲ್ಲಿ. ಎರಡೂ ಚಿತ್ರಗಳ ಮುಹೂರ್ತ ಇಲ್ಲೇ ನಡೆಯಿತು. ಆದರೆ, ನಾವು "ಮುಡಿಂಜ ಇವನ ಪುಡಿ' ಎಂಬ ಚಿತ್ರ ಮಾಡುತ್ತಿದ್ದೀವಿ ಎಂದಾಗ, ತಮಿಳುನಾಡಿನಲ್ಲಿ ಬಹಳಷ್ಟು ಜನ ಇದು "ಕೋಟಿಗೊಬ್ಬ 2'ನ ಡಬ್‌x ವರ್ಷನ್‌ ಅಂತಲೇ ತಿಳಿದುಕೊಂಡಿದ್ದರು. ಏನು ಮಾಡಿದರೂ ಅದು, ಎರಡು ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣ ಮಾಡಿದ ಚಿತ್ರ ಎಂದು ಪ್ರೊಜೆಕ್ಟ್ ಮಾಡುವುದು ಕಷ್ಟವಾಯಿತು. ಅದು ನೇರವಾದ ಸಿನಿಮಾ, ಡಬ್‌x ಸಿನಿಮಾ ಅಲ್ಲ ಎಂದು ಸ್ಪಷ್ಟಪಡಿಸಬೇಕಿತ್ತು. ಆ ಸಂದರ್ಭದಲ್ಲಿ ಏನು ಮಾಡಬೇಕು ಎಂದು ಯೋಚನೆ ಮಾಡಿದಾಗ, ಅಲ್ಲಿ ಆಡಿಯೋ ಬಿಡುಗಡೆ ಮಾಡೋಣ ಅಂತ ಐಡಿಯಾ ಕೊಟ್ಟವರು ಆನಂದ್‌ ಆಡಿಯೋದವರು. ಈ ಚಿತ್ರದ ಮೂಲಕ ಆನಂದ್‌ ಆಡಿಯೋದವರು ಮೊದಲ ಬಾರಿಗೆ ತಮಿಳು ಚಿತ್ರರಂಗಕ್ಕೆ ಬರುತ್ತಿದ್ದಾರೆ. ಅವರನ್ನು ಪರಿಚಯಿಸುವುದರ ಜೊತೆಗೆ, ಚಿತ್ರ ಡಬ್‌ ಮಾಡಿದ್ದಲ್ಲ ಎಂದು ತಿಳಿಸಬೇಕಿತ್ತು. ಹಾಗಾಗಿ ಅಲ್ಲಿ ಆಡಿಯೋ ಬಿಡುಗಡೆ ಮಾಡಬೇಕಾಯಿತು. ಇನ್ನು ಕನ್ನಡದಲ್ಲಿ ಅಷ್ಟರಲ್ಲಾಗಲೇ ಹಾಡುಗಳ ಡೌನ್‌ಲೋಡ್‌ ಪ್ರಾರಂಭವಾಗಿ ಜನಪ್ರಿಯವಾಗಿತ್ತು. ಹಾಗಾಗಿ ಚೆನ್ನೈನಲ್ಲಿ ತಮಿಳು ಚಿತ್ರದ ಹಾಡುಗಳ ಬಿಡುಗಡೆ ಮಾಡಿ, ಇದು ನೇರವಾದ ಚಿತ್ರ ಎಂದು ಸ್ಪಷ್ಟಪಡಿಸುವ ಅಗತ್ಯತೆ ಇತ್ತು. ನಿಜ ಹೇಳಬೇಕೆಂದರೆ, ಆ ಸಮಾರಂಭ ಆದ ನಂತರ, ವಿತರಕರು ಸ್ವಲ್ಪ ಸೀರಿಯಸ್‌ ಆದರು. ಚಿತ್ರದ ಬಿಝಿನೆಸ್‌ ಸಹ ಓಪನ್‌ ಆಯ್ತು' ಎನ್ನುತ್ತಾರೆ ಸುದೀಪ್‌.

No comments:

Post a Comment